ಪರಿಚಯ

ಕವಿಗಳು, ಚಿಂತಕರು ಹಾಗೂ ಮ್ಯಾನೇಜ್ಮೆಂಟ್ ಗುರು
- ಜನನ
- 1 ಅಕ್ಟೋಬರ್ 1962, ಮೈಸೂರು
- ಭಾಷೆ
- ಕನ್ನಡ · ಇಂಗ್ಲಿಷ್
- ಕೃತಿಗಳು
- 30
- ವಿದ್ಯಾಭ್ಯಾಸ
- ಬಿ.ಇ. — ಮಲ್ನಾಡ್ ಕಾಲೇಜ್ ಆಫ್ ಎಂಜಿನಿಯರಿಂಗ್, ಹಾಸನ · ಎಂ.ಬಿ.ಎ. — ಸಿಕ್ಕಿಮ್ ಮಣಿಪಾಲ್ ಯೂನಿವರ್ಸಿಟಿ
- ವೃತ್ತಿ
- ಐಟಿ ಹಾಗೂ ಟೆಲಿಕಾಂ ಕ್ಷೇತ್ರದಲ್ಲಿ 33 ವರ್ಷ; Tejas Networksನ Senior Vice President (International Business) ಆಗಿ ನಿವೃತ್ತಿ
ಸತ್ಯೇಶ್ ಎನ್ ಬೆಳ್ಳೂರ್ ಅವರು 1962ರ ಅಕ್ಟೋಬರ್ 1ರಂದು ಮೈಸೂರಿನಲ್ಲಿ ಜನಿಸಿದರು. ಐ.ಟಿ.ಐ ಕಾಲೋನಿಯ ವಿದ್ಯಾಮಂದಿರದಲ್ಲಿ ಹತ್ತನೆಯ ತರಗತಿಯವರೆಗೆ ಓದಿ, ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಪಿಯುಸಿ, ಹಾಸನದ ಮಲ್ನಾಡ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಬಿ.ಇ. ಹಾಗೂ ಸಿಕ್ಕಿಮ್ ಮಣಿಪಾಲ್ ಯೂನಿವರ್ಸಿಟಿಯಿಂದ ಆನ್ಲೈನ್ ಮೂಲಕ ಎಂ.ಬಿ.ಎ. ಪದವಿ ಪಡೆದರು.
ಐಟಿ ಹಾಗೂ ಟೆಲಿಕಮ್ಯುನಿಕೇಶನ್ ಕ್ಷೇತ್ರಗಳಲ್ಲಿ 33 ವರ್ಷಗಳ ಕಾರ್ಪೊರೇಟ್ ಅನುಭವ ಅವರದು. Infosys, Siemens, IBM, Tellabs ಕಂಪನಿಗಳಲ್ಲಿ ಹಿರಿಯ ಹುದ್ದೆಗಳನ್ನು ನಿರ್ವಹಿಸಿ, Tejas Networks ಸಂಸ್ಥೆಯಲ್ಲಿ 22 ವರ್ಷ ಕೆಲಸ ಮಾಡಿ Senior Vice President (International Business) ಆಗಿದ್ದರು. 50ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವಿಯಾಗಿ ವಾಣಿಜ್ಯ ವ್ಯವಹಾರ ನಡೆಸಿದ ಹೆಗ್ಗಳಿಕೆ ಅವರದು; CII (Confederation of Indian Industry) ವತಿಯಿಂದ ಅನೇಕ ದೇಶಗಳಿಗೆ ಸರ್ಕಾರಿ ನಿಯೋಗಗಳಲ್ಲಿ ಭಾಗವಹಿಸಿದ್ದಾರೆ. ಬದುಕಿನ ಇತರ ಪ್ರವೃತ್ತಿಗಳಲ್ಲಿ ತೊಡಗಿಸಿಕೊಳ್ಳಲು 2018ರಲ್ಲಿ ಸ್ವಯಂ ನಿವೃತ್ತಿ ಪಡೆದರು.
ಅನೇಕ ಎಂಜಿನಿಯರಿಂಗ್ ಹಾಗೂ ಮ್ಯಾನೇಜ್ಮೆಂಟ್ ಕಾಲೇಜುಗಳಲ್ಲಿ ಮತ್ತು ಕಾರ್ಪೊರೇಟ್ ಕಂಪನಿಗಳಲ್ಲಿ ನಿರಂತರವಾಗಿ ಉಪನ್ಯಾಸ ನೀಡುತ್ತ, ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ — Entrepreneurship, ಸ್ಟಾರ್ಟ್ಅಪ್ಗಳಿಗೆ ಆರಂಭದಿಂದ ಬೆಳವಣಿಗೆಯವರೆಗೆ ಸಲಹೆ, Sales & Marketing, International Business, Personality Development, Strategic Management, Change Management, Business Ethics ಮುಂತಾದ ವಿಷಯಗಳಲ್ಲಿ. ಎರಡು ವರ್ಷ ಬೆಂಗಳೂರಿನ ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನ Governing Council ಸದಸ್ಯರಾಗಿದ್ದರು.
2005ರಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಅವರು ಕಾವ್ಯ, ಕತೆ, ಪ್ರಬಂಧ, ನಾಟಕ, ಪ್ರವಾಸ ಕಥನ, ಅನುವಾದ, ಮ್ಯಾನೇಜ್ಮೆಂಟ್ ಬರಹ ಹೀಗೆ ಅನೇಕ ಪ್ರಕಾರಗಳಲ್ಲಿ ಇದುವರೆಗೆ 31 ಕೃತಿಗಳನ್ನು ರಚಿಸಿದ್ದಾರೆ; ಕನ್ನಡದಿಂದ ಇಂಗ್ಲಿಷ್ಗೆ ಹಾಗೂ ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಗಳನ್ನೂ ಮಾಡಿದ್ದಾರೆ. “ನವ್ಯಜೀವಿ” ಎಂಬ ನಾಮಾಂಕಿತದಲ್ಲಿ ಎರಡು ಸಾವಿರಕ್ಕೂ ಅಧಿಕ ಮುಕ್ತಕಗಳನ್ನು ಬರೆದಿದ್ದಾರೆ. ಕನ್ನಡ ಗಾನಕಾವ್ಯದಲ್ಲಿ “ಹನಿಗೀತೆ” ಎಂಬ ಹೊಸ ಪ್ರಕಾರವನ್ನು ಆರಂಭಿಸಿ ಅನೇಕ ಯುವಕವಿಗಳಿಗೆ ಆ ಪ್ರಕಾರದಲ್ಲಿ ಬರೆಯಲು ಪ್ರೇರಣೆ ನೀಡಿದ್ದಾರೆ. ಮ್ಯಾನೇಜ್ಮೆಂಟ್ ವಿಷಯಗಳ ಕುರಿತು ಕನ್ನಡದಲ್ಲಿ ವಿಸ್ತಾರವಾಗಿ ಬರೆದವರಲ್ಲಿ ಮೊದಲಿಗರು; ಅನೇಕ ಮ್ಯಾನೇಜ್ಮೆಂಟ್ ಪಾರಿಭಾಷಿಕ ಪದಗಳಿಗೆ ಕನ್ನಡ ಪದಗಳನ್ನು ಹುಟ್ಟುಹಾಕಿದ್ದಾರೆ. ಉದಯವಾಣಿಯಲ್ಲಿ 2 ವರ್ಷ ಹಾಗೂ ಪ್ರಜಾವಾಣಿಯಲ್ಲಿ 5 ವರ್ಷ ಅಂಕಣ ಬರೆದಿದ್ದಾರೆ. 2013ರಲ್ಲಿ ಕನ್ನಡಪ್ರಭ ಪತ್ರಿಕೆ ಅವರ “ಒಲುಮೆಯ ಹೊನಲು” ಕೃತಿಯನ್ನು ವಿಮರ್ಶಿಸುತ್ತ “ಮಂಕುತಿಮ್ಮನಿಗೊಬ್ಬ ತಮ್ಮ, ನವ್ಯಜೀವಿ” ಎಂದು ಉಲ್ಲೇಖಿಸಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ (AKBMS) Vipranudi ಎಂಬ ಇಂಗ್ಲಿಷ್ ಜರ್ನಲ್ ಆರಂಭಿಸಿ ಮೂರು ವರ್ಷ ಅದರ Editor-in-Chief ಆಗಿದ್ದರು. ಅನೇಕ ಯುವ ಬರಹಗಾರರಿಗೆ ಇಂಗ್ಲಿಷ್ ಜರ್ನಲ್ ಬರವಣಿಗೆಯಲ್ಲಿ ಮಾರ್ಗದರ್ಶನ ನೀಡಿ ಅವರಿಂದ ಲೇಖನಗಳನ್ನು ಬರೆಸಿದರು, ಕೆಲವರ ಲೇಖನಗಳನ್ನು ಪುಸ್ತಕರೂಪದಲ್ಲೂ ಪ್ರಕಟಿಸಿದರು — ಸಂಸ್ಥೆಯಲ್ಲಿ ಇದು ಮೊತ್ತಮೊದಲ ಅಂತಹ ಪ್ರಯತ್ನ. ಮೂವತ್ತಕ್ಕೂ ಹೆಚ್ಚು ಸಹಬರಹಗಾರರ ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಬರೆದಿದ್ದಾರೆ. ಅನೇಕ ಸಾಹಿತ್ಯಾಸಕ್ತರಲ್ಲಿ ಬರವಣಿಗೆಯ ಆಸಕ್ತಿ ಮೂಡಿಸಿ, ಮೌಲ್ಯಾಧಾರಿತ ಲೇಖನ, ಕವಿತೆಗಳನ್ನು ಬರೆಯಲು ಮಾರ್ಗದರ್ಶನ ನೀಡಿ, ಅವರ ಕೃತಿಗಳ ಪ್ರಕಟಣೆಗೂ ಸಲಹೆ ನೀಡಿರುವುದು ಅವರಿಗೆ ಅತ್ಯಂತ ನೆಮ್ಮದಿ ನೀಡಿರುವ ಸಂಗತಿ.
ಅವರ ನೃತ್ಯನಾಟಕ “ಕನ್ನಡೋತ್ಸವ — ಇದು ಕನ್ನಡಿಗರ ಆತ್ಮಕಥೆ” ಸುಮಾರು 140 ನೃತ್ಯಕಲಾವಿದರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಹಾಗೂ ಚೌಡಯ್ಯ ಹಾಲ್ನಲ್ಲಿ ರಂಗಪ್ರಯೋಗಗೊಂಡಿದೆ; ಅಮೆರಿಕದ ಫ್ಲಾರಿಡಾದ ತಾಂಪಾದಲ್ಲಿ ನಡೆದ “ನಾವಿಕಾ ವಿಶ್ವ ಕನ್ನಡ ಸಮಾವೇಶ 2025”ರಲ್ಲೂ ಪ್ರದರ್ಶನಗೊಂಡಿದೆ. ಧ್ವನಿಸುರುಳಿ ಹಾಗೂ ಚಲನಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ; ಕರ್ನಾಟಕದ ಹತ್ತು ಕ್ರಿಕೆಟಿಗರ ಕುರಿತಾದ “Howzat” ಧ್ವನಿಸುರುಳಿ ನಾಡಿನ ಕ್ರಿಕೆಟ್ ವಲಯದಲ್ಲಿ ಮೊದಲ ಗಮನಾರ್ಹ ಪ್ರಯತ್ನ. Vividlip ಯೂಟ್ಯೂಬ್ ಚಾನೆಲ್ನಲ್ಲಿ ವೇದ, ಮ್ಯಾನೇಜ್ಮೆಂಟ್, ಕನ್ನಡ ಸಾಹಿತ್ಯ ಕುರಿತು 80ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ; ವಿಶ್ವವಾಣಿ Clubhouseನಲ್ಲಿ ಮೂರೂವರೆ ವರ್ಷಗಳಿಂದ ಪ್ರತಿ ತಿಂಗಳೂ ಮ್ಯಾನೇಜ್ಮೆಂಟ್ ಹಾಗೂ ಕನ್ನಡ ಸಾಹಿತ್ಯಕೃತಿಗಳ ಕುರಿತು ಮಾತನಾಡುತ್ತಿದ್ದಾರೆ. ಶತಾವಧಾನಿ ಆರ್. ಗಣೇಶರ ಅನೇಕ ಅಷ್ಟಾವಧಾನಗಳಲ್ಲಿ ಹಾಗೂ ಒಂದು ಶತಾವಧಾನದಲ್ಲಿ ಪೃಚ್ಛಕರಾಗಿ ಸಮಸ್ಯಾಪೂರಣ ಹಾಗೂ ದತ್ತಪದಿ ವಿಭಾಗಗಳನ್ನು ನಿರ್ವಹಿಸಿದ್ದಾರೆ. ಬಾಸ್ಕೆಟ್ಬಾಲ್ ಹಾಗೂ ಕ್ರಿಕೆಟ್ ಅವರ ವಿಶೇಷ ಒಲವು; ಈ ಆಟಗಳನ್ನು ಮೇಲ್ದರ್ಜೆಯಲ್ಲಿ ಆಡಿದ ಅನುಭವವೂ ಇದೆ.
ಕಾಲರೇಖೆ
- 1962ಜೀವನಜನನಮೈಸೂರಿನಲ್ಲಿ, ಅಕ್ಟೋಬರ್ 1ರಂದು
- 2005ಜೀವನಸಾಹಿತ್ಯ ಕೃಷಿ ಆರಂಭಕಾವ್ಯ, ಕತೆ, ಪ್ರಬಂಧ, ನಾಟಕ, ಅನುವಾದ, ಮ್ಯಾನೇಜ್ಮೆಂಟ್ ಬರಹ — ಇದುವರೆಗೆ 31 ಕೃತಿಗಳು
- 2013ಪುಸ್ತಕಒಲುಮೆಯ ಹೊನಲುಕನ್ನಡಪ್ರಭ ವಿಮರ್ಶೆ: “ಮಂಕುತಿಮ್ಮನಿಗೊಬ್ಬ ತಮ್ಮ, ನವ್ಯಜೀವಿ”
- 2014ಪ್ರಶಸ್ತಿಪ್ರತಿಭಾನ್ವಿತ ಬರಹಗಾರ ಪ್ರಶಸ್ತಿಲೋಟಸ್ ಸಂಸ್ಥೆ, ಬೆಂಗಳೂರು
- 2017ಪ್ರಶಸ್ತಿರೋಟರಿ ಮುಕ್ತಕ ಸಾಹಿತ್ಯ ಪ್ರಶಸ್ತಿಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ
- 2018ಜೀವನಸ್ವಯಂ ನಿವೃತ್ತಿ33 ವರ್ಷಗಳ ಕಾರ್ಪೊರೇಟ್ ವೃತ್ತಿಯ ನಂತರ ಸಾಹಿತ್ಯ ಹಾಗೂ ಉಪನ್ಯಾಸಗಳತ್ತ
- 2018ಪ್ರಶಸ್ತಿದಸರಾ ಪ್ರಶಸ್ತಿಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗ, ಮೈಸೂರು
- 2024ಪ್ರಶಸ್ತಿಡಿವಿಜಿ ಪ್ರಶಸ್ತಿಡಿ.ವಿ.ಜಿ ಪ್ರತಿಷ್ಠಾನ, ಮೈಸೂರು
- 2025ಪುಸ್ತಕಕನ್ನಡೋತ್ಸವ — ತಾಂಪಾದಲ್ಲಿನಾವಿಕಾ ವಿಶ್ವ ಕನ್ನಡ ಸಮಾವೇಶ 2025, ಫ್ಲಾರಿಡಾ, ಅಮೆರಿಕ
- 2025ಪ್ರಶಸ್ತಿಹಾ.ಮಾ.ನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ“ಕನ್ನಡೋತ್ಸವ” ಕೃತಿಗೆ ಸಮಾಧಾನಕರ ಬಹುಮಾನ
- ಈಗಉಪನ್ಯಾಸಉಪನ್ಯಾಸಗಳುVividlip ಯೂಟ್ಯೂಬ್ನಲ್ಲಿ 80ಕ್ಕೂ ಹೆಚ್ಚು; ವಿಶ್ವವಾಣಿ Clubhouseನಲ್ಲಿ ಪ್ರತಿ ತಿಂಗಳು
ಪ್ರಶಸ್ತಿಗಳು
ಕಾರ್ಯಕ್ರಮ ಆಯೋಜಕರು ಹಾಗೂ ಪತ್ರಿಕೆಗಳಿಗಾಗಿ — ಕಿರು ಪರಿಚಯ, ಛಾಯಾಚಿತ್ರಗಳು ಮತ್ತು ಪುಸ್ತಕಗಳ ಮುಖಪುಟಗಳು.
ಕಿರು ಪರಿಚಯ (PDF)ಛಾಯಾಚಿತ್ರಗಳು (ZIP)ಮುಖಪುಟಗಳು (ZIP)